ಕೊಡು ಕೊಡು ವರವನು - The Indic Lyrics Database

ಕೊಡು ಕೊಡು ವರವನು

गीतकार - Gopika poornima | गायक - Gopika poornima | संगीत - Devi Sri Prasad | फ़िल्म - Sangama | वर्ष - 2008

Song link

View in Roman

ಮಮ.........ಮಮ
ಮಮ.........ಮಮ

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ..............ಮಮ ಮಮ
ಹಣೆಯಲ್ಲಿ ಬರೆದರು ಏನೇ ಬದಲಾಯಿಸಿ ಬಿಡು ನೀನೆ
ನನಗಾಗಿ ಜನಿಸಿದ ಹುಡುಗ ಇವನೇ ತಾನೇ

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ

ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ........ಮಮ
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ...ಮಮ
ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ ನನಗೆ ನನಗೆ ನನಗೆ ನನಗೆ ನನಗೆ....


ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ

ತಾರೆಗಳ ತೋರಿಸುವ ಬಿರು ಬಿರು ಬಿಸಿಲಲು ಹೇಗೋ ಇವ.......ಮಮ
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ..............ಮಮ
ಇವನ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು ಇದುವೇ ಬಯಕೆ ನಿನಗೆ ಹೊರುವೆ ಹರಕೆ

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ....ಮಮ ಮಮ